ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ |
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ ||
ನೇಮಿಸೆಮ್ಮೊಳು ಧರ್ಮಕರ್ಯವ ತೇ ನಮೋಸ್ತು ನಮೋಸ್ತುತೇ |
ಕ್ಷೇಮದಿಂದಲಿ ಪಾಲಿಸೆಮ್ಮನ್ನು ತೇ ನಮೋಸ್ತು ನಮೋಸ್ತುತೇ||
ಸ್ವಾಮಿ ದೇವನೆ...
ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ|
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೇ|| ಸ್ವಾಮಿ ದೇವನೆ...
ಕಾವರಿಲ್ಲವು ನಿನ್ನ ಬಿಟ್ಟರೆ ಸುರ್ಯನೇ ಜಗದೀಶನೇ|
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ|| ಸ್ವಾಮಿ ದೇವನೆ...
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ|
ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ|| ಸ್ವಾಮಿ ದೇವನೆ...
ರಾತ್ರಿನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ|
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು|| ಸ್ವಾಮಿ ದೇವನೆ...
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ|
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ|| ಸ್ವಾಮಿ ದೇವನೆ...
ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ|
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ|| ಸ್ವಾಮಿ ದೇವನೆ...
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ|
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು|| ಸ್ವಾಮಿ ದೇವನೆ...
ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯು|
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ದಿಯು|| ಸ್ವಾಮಿ ದೇವನೆ...
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ|
ದೀನ ಪಾಲನೆ ನಿನ್ನ ದೀನದೊಳಿರ್ಪನಮ್ಮನ್ನು ಪಾಲಿಸೈ|| ಸ್ವಾಮಿ ದೇವನೆ...
Shanthi Mantra
saha nAvavatu saha nau bhunaktu
saha vIryaM karavAvahai |
tejasvi nAvadhItamastu
mA vidviSAvahai ||
oM sAntiH sAntiH sAntiH |
The Pledge
India is my country. All Indians are my brothers and sisters.
I Love my country and i am proud of its rich and varied heritage.
I shall always strive to be worthy of it.
I shall give my parents,teachers and all elders respect and treat everyone with courtesy.
To my country and my people i pledge my devotion.
In their well-being and prosperity alone lies my happiness.
National Anthem
Jana-Gana-Mana-Adhinayaka, Jaya He,
Bharata-Bhagya-Vidhata
Punjab-Sindhu-Gujarata-Maratha
Dravida-Utkala-Vanga
Vindhya-Himachala-Yamuna-Ganga
Uchchhala-JaladthaTaranga
Tava Subha Name Jage
Tava Subha Ashisa Mage
Gahe Tava Jaya Gatha.
Jana-Gana-Mangala Dayaka, Jaya He
Bharata-Bhagya-Vidhata,
Jaya He, Jaya He, Jaya He,
Jaya, Jaya, Jaya, Jaya He.